News

 
 

AWARD OF SCHOLARSHIP FORM

 

ಭಾರತೀಯ ಭಕ್ತಿ ಪರಂಪರೆ ಮತ್ತು ಕನಕದಾಸರು

ಭಾರತೀಯ ಭಕ್ತಿ ಪರಂಪರೆ ಮತ್ತು ಕನಕದಾಸರು.

 

Tender for painting

Tender for painting of interior & exterior of Sangha Building.

Click here to download tender details file.

 

Scholarship form for download

Please download Scholarship form here

 

ಸಂಘದ ಕ್ಯಾಂಟೀನ್ ನಲ್ಲಿ ವಿಶೇಷ ರಿಯಾಯಿತಿ

ಆತ್ಮೀಯ ದೆಹಲಿ ಕನ್ನಡಿಗರಿಗೆ ವಂದನೆಗಳು

ದೆಹಲಿ ಕರ್ನಾಟಕ ಸಂಘದ ಕ್ಯಾಂಟೀನ್ ನಲ್ಲಿ (KFC) ಸಂಘದ ಆಡಳಿತ ಮಂಡಳಿಯ ವಿಶೇಷ ಕೋರಿಕೆಯ ಮೇರೆಗೆ ಈ ಕೆಳಗಿನಂತೆ ದರಗಳನ್ನು ಕಡಿಮೆ ಮಾಡಲಾಗಿದೆ.

ಕ್ರ.ಸಂಖ್ಯೆ

ಹಿಂದಿನ ದರ (ರೂ.ಗಳಲ್ಲಿ) / ಹೊಸ ದರ  (ರೂ.ಗಳಲ್ಲಿ)

1 ಹಾಲು – 30/- / ಹಾಲು-15/-

2. ಟೀ-30/- / ಟೀ-20/-

3. ಗ್ರೀನ್ ಟೀ-30/- / ಗ್ರೀನ್ ಟೀ-20/-

4. ಕಾಫಿ-30/- / ಕಾಫಿ-25/-

ಇದರ ಹೊರತಾಗಿ ಸಂಘದ ಸದಸ್ಯರಿಗಾಗಿ ಕ್ಯಾಂಟೀನ್ ನಲ್ಲಿ  ಶೇಕಡಾ 15ರಷ್ಟು ರಿಯಾಯಿತಿಯನ್ನು ನೀಡಲಾಗಿದೆ. ಆದಷ್ಟು ಬೇಗ ಸಂಘದಿಂದ ಸದಸ್ಯರಿಗೆ ಐ ಕಾರ್ಡ್ ಗಳನ್ನು ನೀಡಲಾಗುವುದು. ಈ ರಿಯಾಯಿತಿ ದರವನ್ನು ನೀಡಿದ ಶ್ರೀ ಶೇಖರ ಬಂಗೇರ ಅವರಿಗೆ ಸಂಘದ ಪರವಾಗಿ ವಿಶೇಷ ಕೃತಜ್ಞತೆಗಳು.

ವಸಂತ ಶೆಟ್ಟಿ ಬೆಳ್ಳಾರೆ

ಅಧ್ಯಕ್ಷರು

 

ಅಭಿನಂದನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

ದೆಹಲಿಯ ಒಕ್ಕಲಿಗ ಗೌಡ ಸಂಘವು ಆಗಸ್ಟ್ 6ರಂದು ಬುಧವಾರ ಸಂಜೆ 6.00ಗಂಟೆಗೆ ಆಶೀರ್ವಚನ, ಅಭಿನಂದನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ದೆಹಲಿಯ ಈ ಕನ್ನಡದ ಸಂಸ್ಥೆ ಆಯೋಜಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಎಚ್.ಡಿ. ದೇವೇಗೌಡ , ಮಾನ್ಯ ರೈಲ್ವೇ ಸಚಿವರಾದ ಶ್ರೀ ಡಿ.ವಿ. ಸದಾನಂದ ಗೌಡ, ಸಂಸದರುಗಳಾದ  ಕು. ಶೋಭಾ ಕರಂದ್ಲಾಜೆ, ಶ್ರೀ ಡಿ.ಕೆ. ಸುರೇಶ್, ಶ್ರೀ ಎಸ್.ಪಿ. ಮುದ್ದುಹನುಮೇ ಗೌಡ, ಶ್ರೀ ಸಿ.ಎಸ್. ಪುಟ್ಟರಾಜು, ಶ್ರೀ ಪ್ರತಾಪ್ ಸಿಂಹ ಹಾಗೂ ರಾಜ್ಯಸಭಾ ಸದಸ್ಯರಾದ ಪ್ರೊ. ರಾಜೀವ್ ಗೌಡ ಪಾಲ್ಗೊಳ್ಳಲಿದ್ದಾರೆ.

 

ಸಂಘದ ಗ್ರಂಥಾಲಯ

ದೆಹಲಿ ಕರ್ನಾಟಕ ಸಂಘದ ಗ್ರಂಥಾಲಯದಲ್ಲಿ ಕತೆ, ಕವನ, ಕಾದಂಬರಿ, ಲಲಿತ ಪ್ರಬಂಧಗಳು, ನಾಟಕ , ವಿಮರ್ಶೆ ಹೀಗೆ ಹಲವಾರು ಹೊಸ ಮತ್ತು ಹಳೆಯ ಕೃತಿಗಳು ಹಾಗೂ  ಕನ್ನಡದ ಅನೇಕ ದೈನಿಕಗಳು, ವಾರ ಹಾಗೂ ಮಾಸ ಪತ್ರಿಕೆಗಳು ಲಭ್ಯವಿದೆ. ದೆಹಲಿ ಕನ್ನಡಿಗರು ಇದರ ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿ.

 

ವಚನ ಗಾಯನ ತರಬೇತಿ

ಮೇ 11, 2014ರಂದು ‘ಬಸವ’ ಮತ್ತು ‘ಅಕ್ಕ’ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಪಂಡಿತ್ ಸೋಮನಾಥ್ ಮರಡೂರ್ ಮತ್ತು ತರಬೇತಿ ಪಡೆದ ದೆಹಲಿ ಕನ್ನಡ ಗಾಯಕರ ವಚನಗಾಯನವನ್ನು ಏರ್ಪಡಿಸಲಾಗಿದೆ.
ಈ ವಚನಗಾಯನದಲ್ಲಿ ಪಾಲ್ಗೊಳ್ಳುವವರಿಗೆ ಏಪ್ರಿಲ್ 20, 26 ಮತ್ತು 27ರಂದು ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆಯವರೆಗೆ ಪಂಡಿತ್ ಸೋಮನಾಥ್ ಮರಡೂರ್ ಅವರು ವಚನ ಗಾಯನ ತರಬೇತಿ ನೀಡುವರು. ಆಸಕ್ತಿಯುಳ್ಳವರು ತಮ್ಮ ಹೆಸರನ್ನು ಸಂಘದ ಕಾರ್ಯಾಲಯದಲ್ಲಿ ನೊಂದಾಯಿಸಬೇಕಾಗಿ ವಿನಂತಿ.

 

ಉಚಿತ ವೈದ್ಯಕೀಯ ತಪಾಸಣೆ

ಡಾ. ನಿರಂಜನ್ ನಾಯ್ಕ್ ಅವರು ಕ್ಯಾನ್ಸರ್ ಸಂಬಂಧಿತ ರೋಗಗಳಿಗೆ ಭಾನುವಾರ 20 ಏಪ್ರಿಲ್  2014ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಸಂಘದಲ್ಲಿ ಉಚಿತ ವೈದ್ಯಕೀಯ ಸಲಹೆ ನೀಡಲಿದ್ದಾರೆ.
ಡಾ. ಸಾಯಿಪ್ರಶಾಂತಿ ಶೆಟ್ಟಿ ಅವರು ಭಾನುವಾರ 20 ಏಪ್ರಿಲ್ 2014ರಂದು ಸಾಯಂಕಾಲ 4 ಗಂಟೆಯಿಂದ ಆಯುರ್ವೇದ ಮತ್ತು ಯೋಗ ಸಂಬಂಧಿತ ರೋಗಗಳಿಗೆ ಉಚಿತ ವೈದ್ಯಕೀಯ ಸಲಹೆ ನೀಡಲಿದ್ದಾರೆ.
ಸದಸ್ಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿ.

 

ಕೆಆರ್ ನಾಗರಾಜ ನೆನಪಿನ ವಿದ್ಯಾರ್ಥಿ ವೇತನ ನಿಧಿ

ದೆಹಲಿ ಕರ್ನಾಟಕ ಸಂಘ ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸ ಸಂದರ್ಭದಲ್ಲಿ ದಿ.ಕೆ.ಆರ್. ನಾಗರಾಜ ನೆನಪಿನಲ್ಲಿ ನೀಡುತ್ತಿರುವ ವಿದ್ಯಾರ್ಥಿ ವೇತನ ನಿಧಿಯಲ್ಲಿ 1.75 ಲಕ್ಷ ರೂಪಾಯಿಗಳಿದ್ದು, ಈ ನಿಧಿಯ ಆದಾಯದ ಜೊತೆ ಸಂಘದ ಕೊಡುಗೆಯನ್ನು ಸೇರಿಸಿ ಪ್ರತಿ ವರ್ಷವೂ ಅರ್ಹತೆಯ ಹಾಗೂ ಅವಶ್ಯಕತೆ ಆಧಾರದ ಮೇಲೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.
ಫಲಾನುಭವಿಗಳ ಸಂಖ್ಯೆ ಅಧಿಕವಿರುವುದನ್ನು ಗಮನದಲ್ಲಿಟ್ಟುಕೊಂಡು ಸಂಘವು ಈ ನಿಧಿಯ ಮೊತ್ತವನ್ನು ಕನಿಷ್ಠ ರೂ. 10 ಲಕ್ಷದವರೆಗೆ ವಿಸ್ತರಿಸುವ ಯೋಚನೆ ಹೊಂದಿದೆ. ಈ ಕಾರ್ಯದಲ್ಲಿ ತಮ್ಮ ಸಹಾಯ ಅತ್ಯಮೂಲ್ಯವಾಗಿದ್ದು ದೇಣಿಗೆಯನ್ನು ನೀಡಿ ಸಹಕರಿಸಬೇಕಾಗಿ ವಿನಂತಿಸುತ್ತೇವೆ.
ತಮ್ಮ ದೇಣಿಗೆಯನ್ನು ದೆಹಲಿ ಕರ್ನಾಟಕ ಸಂಘದ ಹೆಸರಿಗೆ ಡಿಡಿ/ಚೆಕ್ ಮೂಲಕ ಕಳುಹಿಸಬಹುದು. ಈ ದೇಣಿಗೆಗೆ ಆದಾಯ ತೆರಿಗೆ ವಿನಾಯಿತಿ (80ಜಿ) ಇದೆ.
ರೂ. 10,000/- ಮತ್ತು ಹೆಚ್ಚು ದೇಣಿಗೆ ನೀಡಿದವರ ಭಾವಚಿತ್ರ ಮತ್ತು ವಿವರನ್ನು ಸಂಘದ ಮುಖಪತ್ರಿಕೆ ಅಭಿಮತದಲ್ಲಿ ಪ್ರಕಟಿಸಲಾಗುವುದು.

ವಸಂತ ಶೆಟ್ಟಿ ಬೆಳ್ಳಾರೆ
ಅಧ್ಯಕ್ಷರು

 
 
     
   
 
DKS e- Abhimata
 
 
 
DKS - Committee
 
 
 
Send us a Message