“ಆಕಾಶ ದೀಪವು ನೀನು” – ಸಂಗೀತ ರಸಸಂಜೆ ಕಾರ್ಯಕ್ರಮ
ಆತ್ಮೀಯ ಕನ್ನಡಿಗರೇ, ದೆಹಲಿ ಕರ್ನಾಟಕ ಸಂಘವು ಕನ್ನಡ ಚಲನಚಿತ್ರ ರಂಗದ ಮೇರು ನಟ ಪ್ರಣಯರಾಜ ಶ್ರೀನಾಥ್ ಅಭಿನಯದ ಆಯ್ದ ಚಲನಚಿತ್ರ ಗೀತೆಗಳ “ಆಕಾಶ ದೀಪವು ನೀನು” – ಸಂಗೀತ ರಸಸಂಜೆ ಕಾರ್ಯಕ್ರಮವನ್ನು 09 ಆಗಸ್ಟ್ 2026, ಭಾನುವಾರ, ಸಂಜೆ 4.30 ಗಂಟೆಗೆ ನಟ ಶ್ರೀನಾಥ್ ಸಮ್ಮುಖದಲ್ಲಿ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಖ್ಯಾತ ಗಾಯಕ ಶ್ರೀ ರಾಮಚಂದ್ರ ಹಡಪದ್ ಮತ್ತು ತಂಡ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ತಾವು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಕಾರ್ಯಕ್ರಮವು ಸಂಜೆ 4.30ಕ್ಕೆ ಸರಿಯಾಗಿ ಆರಂಭವಾಗಲಿದೆ. ತಾವೆಲ್ಲ ಮುಂಚಿತವಾಗಿ ಬಂದು ಸಭಾಂಗಣದಲ್ಲಿ ಆಸೀನರಾಗಿರಬೇಕೆಂದು ಕೋರುತ್ತೇವೆ. ತಮ್ಮೆಲ್ಲರನ್ನೂ ಆದರದಿಂದ ಸ್ವಾಗತಿಸುತ್ತಿದ್ದೇವೆ. ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ದೆಹಲಿ ಕರ್ನಾಟಕ ಸಂಘ
ಉಪನ್ಯಾಸ ಕಾರ್ಯಕ್ರಮ
ಕನಕಾಂಗಿ ಕಲ್ಯಾಣ
ಕನಕಾಂಗಿ ಕಲ್ಯಾಣ
ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ,ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಇವರಿಂದ ಬಡಗುತಿಟ್ಟು ಯಕ್ಷಗಾನ ಪ್ರದರ್ಶನ
ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ,ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಇವರಿಂದ ಬಡಗುತಿಟ್ಟು ಯಕ್ಷಗಾನ ಪ್ರದರ್ಶನ ಕನಕಾಂಗಿ ಕಲ್ಯಾಣ ದಿನಾಂಕ : 02.08.2026 ಸಮಯ ಸಂಜೆ : 4.30 ಸ್ಥಳ : ಸಂಘದ ಸಭಾಂಗಣ
ಕಲರವ
ಕಲರವ
ಸಾಂಸ್ಕೃತಿಕ ಹಬ್ಬ
12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ-2026
12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ-2026
ಅಭಿನಂದನೆ ಮತ್ತು ಸಂವಾದ
ಅಭಿನಂದನೆ ಮತ್ತು ಸಂವಾದ