ಸಂಘದಿಂದ ಸರ್ಕಾರದಡೆಗೆ-ಕನ್ನಡಿಗರ ಸೌಹಾರ್ದಯುತ ನಡಿಗೆ

ರಾಷ್ಟ್ರ ರಾಜಧಾನಿಯಲ್ಲಿ ಮೊಟ್ಟ ಮೊದಲನೇ ಬಾರಿಗೆ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಧರಿಸಿ, ಸಂಘದಿಂದ ಕರ್ನಾಟಕ ಭವನದವರೆಗೆ ಸೌಹಾರ್ದಯುತ ನಡಿಗೆಯನ್ನು (Walkathon) ಆಯೋಜಿಸಲಾಗಿದೆ.

ನವೆಂಬರ್ 1, 2026 ರಂದು ಸಂಘದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಬೆಳಿಗ್ಗೆ 7.00ಕ್ಕೆ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ, ರಾವ್ ತುಲಾರಾಮ್ ಮಾರ್ಗವಾಗಿ ಕರ್ನಾಟಕ ಭವನ ತಲುಪಿ, ಕರ್ನಾಟಕ ಭವನದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸರ್ಕಾರದ ಪ್ರತಿನಿಧಿಗಳಿಗೆ ನಮ್ಮ ಭಿನ್ನವತ್ತಳೆಯನ್ನು ಸಲ್ಲಿಸಿ ಅಲ್ಲಿಯೇ ಬೆಳಗಿನ ಉಪಹಾರವನ್ನು ಮುಗಿಸಿ ಹಿಂತಿರುಗುವುದು ಅಂದಿನ ಕಾರ್ಯಕ್ರಮವಾಗಿರುತ್ತದೆ.

ಈ ಕೆಳಗಿನ ಲಿಂಕ್‌ಗೆ ಕ್ಲಿಕ್‌ ಮಾಡಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿಮ್ಮನ್ನು ರಿಜಿಸ್ಟರ್‌ ಮಾಡಿಕೊಳ್ಳಿ.
https://forms.gle/5QufdpTu3BZZRmTXA ಎಲ್ಲಾ ನೋಂದಾಯಿತ ಕನ್ನಡಿಗರಿಗೆ ಉಚಿತ ಕಿಟ್‌ಗಳನ್ನು ನೀಡಲಾಗುವುದು