ಆತ್ಮೀಯ ಕನ್ನಡಿಗರೇ,
ದೆಹಲಿ ಕರ್ನಾಟಕ ಸಂಘವು ಕನ್ನಡ ಚಲನಚಿತ್ರ ರಂಗದ ಮೇರು ನಟ ಪ್ರಣಯರಾಜ ಶ್ರೀನಾಥ್ ಅಭಿನಯದ ಆಯ್ದ ಚಲನಚಿತ್ರ ಗೀತೆಗಳ “ಆಕಾಶ ದೀಪವು ನೀನು” – ಸಂಗೀತ ರಸಸಂಜೆ ಕಾರ್ಯಕ್ರಮವನ್ನು 09 ಆಗಸ್ಟ್ 2026, ಭಾನುವಾರ, ಸಂಜೆ 4.30 ಗಂಟೆಗೆ ನಟ ಶ್ರೀನಾಥ್ ಸಮ್ಮುಖದಲ್ಲಿ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಖ್ಯಾತ ಗಾಯಕ ಶ್ರೀ ರಾಮಚಂದ್ರ ಹಡಪದ್ ಮತ್ತು ತಂಡ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ತಾವು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಕಾರ್ಯಕ್ರಮವು ಸಂಜೆ 4.30ಕ್ಕೆ ಸರಿಯಾಗಿ ಆರಂಭವಾಗಲಿದೆ. ತಾವೆಲ್ಲ ಮುಂಚಿತವಾಗಿ ಬಂದು ಸಭಾಂಗಣದಲ್ಲಿ ಆಸೀನರಾಗಿರಬೇಕೆಂದು ಕೋರುತ್ತೇವೆ. ತಮ್ಮೆಲ್ಲರನ್ನೂ ಆದರದಿಂದ ಸ್ವಾಗತಿಸುತ್ತಿದ್ದೇವೆ.
ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು
ದೆಹಲಿ ಕರ್ನಾಟಕ ಸಂಘ
