ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಂಭ್ರಮಾಚರಣೆ ನಾಡಪ್ರಭು ಕೆಂಪೇಗೌಡರ ಕನಸಿನ ಅಖಂಡ ಬೆಂಗಳೂರು ಜಿಲ್ಲಾ ಸಾಂಸ್ಕೃತಿಕ ಉತ್ಸವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಕಲೆಗಳ ಹಬ್ಬ

ದೆಹಲಿ ಕರ್ನಾಟಕ ಸಂಘ @75 ಅಮೃತ ಮಹೋತ್ಸವ ಅಂಗವಾಗಿ 8ನೇ ಹಾಗೂ ಕೊನೆಯ ಜಿಲ್ಲಾವಾರು ಕಾರ್ಯಕ್ರಮ ನಾಡಪ್ರಭು ಕೆಂಪೇಗೌಡರ ಕನಸಿನ ಅಖಂಡ ಬೆಂಗಳೂರು ಜಿಲ್ಲಾ ಸಾಂಸ್ಕೃತಿಕ ಉತ್ಸವ. (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಭಾಗದ ಸಾಂಸ್ಕೃತಿಕ ಕಲೆಗಳ ಉತ್ಸವ).

ದಿನಾಂಕ22/01/2023 ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಕರಗ ಕುಣಿತ. ಸೂತ್ರದ ಗೊಂಬೆಯಾಟ. ಸೋಮನ ಕುಣಿತ. ಕೊಂಬುಕಹಳೆ. ನಂದಿದ್ವಜ ವೀರಗಾಸೆ. ತಮಟೆ ನೃತ್ಯ. ಡೊಳ್ಳು ಕುಣಿತ. ಪೂಜಾ ಕುಣಿತ. ಸಮೂಹ ಜಾನಪದ ನೃತ್ಯ.ಜಾನಪದ ಗಾಯನ.ಸುಗಮ ಸಂಗೀತ ಮತ್ತು ನಾಡಪ್ರಭು ಕೆಂಪೇಗೌಡರ ಸಾಕ್ಷಾಚಿತ್ರ ಮತ್ತು ನೃತ್ಯ ನಾಟಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಜೊತೆಗೆ ದೆಹಲಿ ಕರ್ನಾಟಕ ಸಂಘದ ವಿದ್ಯಾರ್ಥಿ ವೇತನ. ವಿತರಣಾ ಕಾರ್ಯಕ್ರಮ ಜರಗಲಿದೆ ತಾವೆಲ್ಲರೂ ಕುಟುಂಬ ಸಮೇತ ತಪ್ಪದೇ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

 

Leave a Reply

Your email address will not be published. Required fields are marked *